ನಾರಾಯಣ ವರ್ಮ ಮತ್ತು ಶ್ರೀ ಲಕ್ಷ್ಮೀ ಹೃದಯ.
ಜೀವನದಲ್ಲಿ ಎದುರಿಸುವ ಹಣಕಾಸಿನ ಸಮಸ್ಯೆಗೆ , ಮನೆಯಲ್ಲಿ ಶಾಂತಿಯ ವಾತಾವರಣಕ್ಕೆ , ನೆಮ್ಮದಿ ,
ಸಂತೋಷಕ್ಕೆ , ಒಳ್ಳೆಯ ಆರೋಗ್ಯಕ್ಕೆ ಒಳ್ಳೆಯ ಔಷಧ ಅಂದರೆ ಶ್ರೀ ವಾದಿರಾಜರ ನಾರಾಯಣ ವರ್ಮ ಹಾಗೂ ಶ್ರೀ ಲಕ್ಷ್ಮೀ ಹೃದಯ . ದಿನನಿತ್ಯ ಹೇಳಿ ಕೊಳ್ಳಬೇಕು. ವಾದಿರಾಜರ ನಾರಾಯಣ ವರ್ಮ ಮೊದಲು ಹೇಳಿ ನಂತರ ಶ್ರೀ ಲಕ್ಷ್ಮೀ ಹೃದಯ ಹೇಳಿ ಕೊಂಡು .. ನಂತರ ನಾರಾಯಣ ವರ್ಮ ಹೇಳಿ ಕೊಳ್ಳಬೇಕು . ದಿನನಿತ್ಯ ಸಮಯವಿದ್ದರೆ ಹೇಳಿಕೊಂಡರೆ ಒಳ್ಳೆಯದು .
ಕೊನೆ ಪಕ್ಷ ಪ್ರತಿ ಶುಕ್ರವಾರವಾದರೂ ಹೇಳಿಕೊಳ್ಳಬೇಕು. ಶ್ರೀಮನ್ನಾರಾಯಣನ ಜೊತೆಗೆ ಶ್ರೀ ಲಕ್ಷ್ಮೀದೇವಿಯ ವಿಶೇಷ ಅನುಗ್ರವಾಗುತ್ತದೆ. ಸಾಮಾನ್ಯ ಸಜ್ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಅನುಕೂಲ ಕ್ಕಾಗಿ ಶ್ರೀ ವಾದಿರಾಜ ಯತಿಗಳು ಶ್ರೀ ನಾರಾಯಣ ವರ್ಮವನ್ನು ಹಾಗೂ ಶ್ರೀ ಲಕ್ಷ್ಮೀ ಹೃದಯ ವನ್ನು ಕನ್ನಡೀಕರಿಸಿದ್ದಾರೆ.
ವಾದಿರಾಜ ಯತಿಗಳ " ಶ್ರೀ ನಾರಾಯಣ ವರ್ಮ"
ಸಕಲ ಋಷಿಗಳಲ್ಲಿ ಹರಿ ನಮ್ಮ ಸ್ವಾಮಿಯಾಗಿ ರಕ್ಷಿಸು |
ಜಲದಲ್ಲಿ ಮಚ್ಛಾವತಾರನಾಗಿ | ಸ್ಥಳದಲ್ಲಿ ವಾಮನನಾಗಿ ರಕ್ಷಿಸು ನಿಮ್ಮ ನೆನೆವರಾ | ಆಕಾಶದಲ್ಲಿ ತ್ರಿವಿಕ್ರಮನಾಗಿ ರಕ್ಷಿಸು || ಭಯಗಳಲ್ಲಿ ನಾರಸಿಂಹನಾಗಿ | ಮಾರ್ಗದಲ್ಲಿ ವರಾಹನಾಗಿ ರಕ್ಷಿಸು ನಿಮ್ಮ ನೆನೆವರಾ | ಪರ್ವತಾಗ್ರ ದಲ್ಲಿ ಪರಶುರಾಮನಾಗಿ ರಕ್ಷಿಸು ನಿಮ್ಮ ನೆನೆವರಾ l ಆಶ್ರಯದಲ್ಲಿ ನರನಾರಾಯಣರಾಗಿ ರಕ್ಷಿಸು | ಅಯೋಗ್ಯರಲ್ಲಿ ದತ್ತಾತ್ರೇಯನಾಗಿ ರಕ್ಷಿಸು | ಕರ್ಮಬಂಧಗಳೆಲ್ಲ ಕಳೆದು ರಕ್ಷಿಸು ಕಪಿಲ ಮೂರ್ತಿಯಾಗಿ ಪ್ರಾತಃಕಾಲದಲ್ಲಿ ಕೇಶವ
ನಮ್ಮ ರಕ್ಷಿಸು |
ಸಾಯಂಕಾಲದಲ್ಲಿ ಗೋವಿಂದ ನಮ್ಮ ರಕ್ಷಿಸು |ಅಪರಾಹ್ಣ ಕಾಲಗಳೆಲ್ಲ ಕಳೆದು ರಕ್ಷಿಸು | ನಮ್ಮ ಸಕಲ ಕಾಲಗಳಲಿ ನರಕದಿಂದ ಕೂರ್ಮನಾಗಿ ರಕ್ಷಿಸು | ವಿಪತ್ತಿನಿಂದ ಧನ್ವಂತರಿ ರಕ್ಷಿಸು |ಅನ್ಯದೇವತೆ ಭಜನೆ ಕಳೆದು ರಕ್ಷಿಸಯ್ಯ ಶ್ರೀಕೃಷ್ಣ ಮೂರುತಿಯಾಗಿ | ಅಜ್ಞಾನ ವಿಷಯಗಳ ಕಳೆದು ರಕ್ಷಿಸು ವೇದವ್ಯಾಸ ಮೂರುತಿಯಾಗಿ |ಕೃಷ್ಣನ ಶಂಖವೆ ನಿಮ್ಮ ಧನಿದುರಿ ರಾಕ್ಷಸರ ಎದೆ ಒಡೆಸಿ, ಭಯ ಬಿಡಿಸಿ ಲಯವನೆ
ಮಾಡಿಸಿ ಪೂತನಿಗಂಧರ್ವರು | ಕೂಷ್ಮಾಂಡ, ತೋರಿಸಲು ವಿಷ್ಣುಗದೆ ರಾಕ್ಷಸರ ಒಡೆದು ಚೂರ್ಣವ ಮಾಡಿ | ಕಿಡಿ ಗಳಂತೆ ಭೂಮಿ ಮೇಲೆ ಆಧರಿಸಿ | ಶತಚಂದ್ರ ಪ್ರಭೆ ಯಂತೆ ಹೊಳೆವ ಹರಿಯು | ನಮ್ಮ ಮತಿವಂತರು ವೈರಿಕಣ್ಣಿಗೆ ಕಾಣಬಾರದು ಮಾಡಿ |ತೋರಿಸಿ ತಮ್ಮ ದಿವ್ಯತೇಜಗಳು | ಧರ್ಮ ವಿಷಯದಲಿ ಹಯಗ್ರೀವನಾಗಿ ರಕ್ಷಿಸು |
ತ್ರಿಸಂಧ್ಯಾಕಾಲದಲಿ ದಾಮೋದರನಾಗಿ ವಿಶ್ವಮೂರ್ತಿ
ಯಾಗಿ ರಕ್ಷಿಸು |ಅರ್ಧರಾತ್ರಿಯಲಿ ಹೃಷೀಕೇಶನಾಗಿ | ಅಪರಾತ್ರಿಯಲಿ ರಕ್ಷಿಸಯ್ಯ ಶ್ರೀವತ್ಸಮೂರ್ತಿಯಾಗಿ | ಸಾಮವೇದಕೆ ಅಭಿಮಾನಿಯಾಗಿ ಗರುಡವಾಹನನೆ | ಸಲಹೆನ್ನ ವಿಷದ ಭಯಗಳ ಬಿಡಿಸಿ | ಕೃಷ್ಣಮುಕುಟ ಧರನೆ ರಕ್ಷಿಸೋ ನಮ್ಮನ್ನ ಪ್ರಾಣೇಂದ್ರಿಯದಿಂದ | ಬುದ್ಧಿಯಿಂದ ದಿಕ್ಕು ದಿಕ್ಕುಗಳಲಿ ನಾರಸಿಂಹಮೂರ್ತಿ ಯಾಗಿ | ನಾರಸಿಂಹ ನಾದದಲಿಂದ ಎಲ್ಲ ಪರಿಯಿಂದ ಭಕ್ತರನ್ನೆಲ್ಲ ನರಹರಿ ಇದ್ದು ರಕ್ಷಿಸೋ |
ಗುರುಮಧ್ವರಾಯರ ಗುರುವಿಶ್ವ ವ್ಯಾಪಕರ ಸುವಿಷ್ಣು ವೈಷ್ಣವರ ಮಗನಂತೆ ನಿಮ್ಮ ಸುನಾಮ ಎಂದು ಪಾಡಿ ಸುಖಿಯಾಗಿ ಜಮದಗ್ನಿ ವತ್ಸ ಪ್ರಹ್ಲಾದವರದ, ಅಸುರರ ಗೆಲಿದ ಬಲರಾಮ ಜಾನಕಿವಲ್ಲಭ ಜಯ ಜಯ ರಾಮ ನಿತ್ಯ ವೈಕುಂಠ ನಿಜ ಗೋವಿಂದ, ಅಂಬರೀಷ ರಾಯಗೆ ವರಗಳ ಕೊಟ್ಟ ನಂಬಿದ ಭಕ್ತರಿಗೆ ಅಭಯ ಕೊಟ್ಟ ಯಶೋದೆಯ ಮನ ಉದ್ದರಿಸಿ ಹಯವದನ ರಕ್ಷಿಸು |
|| ಷಷ್ಠಸ್ಕಂಧ ಅಷ್ಟಮಾಧ್ಯಾಯದಲಿ ಇಂದ್ರನಿಗೆ ಉಪದೇಶಿಸಿದ ನಾರಾಯಣವರ್ಮವು ಸಂಪೂರ್ಣ ||
ಶ್ರೀ ವಾದಿರಾಜ ಯತಿಗಳ " ಶ್ರೀ ಲಕ್ಷ್ಮೀ ಹೃದಯ "
ಶ್ರೀ ದೇವಿ ತಾನು ಶ್ರೀ ಧಾಮನ್ನ ಮನೆಯಲ್ಲಿ ಆದಿ ಅಂತ್ಯ ಗಳಿಲ್ಲದಿರಲು l ಚೌಧ್ಯ ಸುಖರೂಪದಿಂದ ಅವಳಿಗೆ ವೇದವಾಲಿಗಳ ಓದುತ್ತಿರಲು l ಅವಳಿಂದ ಹರಿಯು ಮೂರು ಮನೆಗಳಿಪ್ಪಾಲೆಯಕೆತನ ಭಯವಿಲ್ಲ l
ಮೊದಲೆ ಉದಕವಿಲ್ಲ ಆದಕಾರಣದಿಂದ ಮುದದಿ
ತಾನಾದಳು ಅಚ್ಯುತಗೆ ಅಂಭುದಿಯಾದಳು l ಆಗ ಮಹಾಲಕುಮಿ ಅಂಬರದ ಆಭರಣವಾದಳು l ಪೊಂಬಣ್ಣದ ಅಲೆಯಾದಳು ಎನೆಂಬೆ ಇವಳ
ಸಾಹಸಕ್ಕೆ l ಶ್ರೀಭೂ ದುರ್ಗೆಯರ ಆಲಿಸಿದನು ಹರಿಯುತಾ ಆಲದೆಲೆಯ ಮೇಲೆ ಮಲಗಿದನು l
ಅಚ್ಯುತನ ಹೃದಯದಲೆ ಲಿಂಗವಿಶಿಷ್ಟರಾದ ಇನಿತು
ಜೀವರ ಹಿಡಿ ತುಂಬಿಕೊಂಡು l ತನಯನ ನೂರು ವರ್ಷ ಪರಿಯಂತದಿ ವನಜಾಕ್ಷ ವಟಪತ್ರ ಶಯನನಾಗಿ l ಜನರೆಲ್ಲ ತಮ್ಮ ಗತಿಗೆ ತಕ್ಕ ಸಾಧನವ ಸಾಧಿಸಿಕೊಳ್ಳಲೆಂದುl ಕರುಣಿ ಪುನರಪಿ ಸೃಷ್ಟಿಯ ಮಾಡುವೆನೆಂದು l ಲಾಲನೆಗೆ ಪ್ರಕೃತಿಯ ಮಮತೆಯಿತ್ತು l ಗುಣತ್ರಯಾತ್ಮಕ ಸೂಕ್ಷ್ಮ ತತ್ವರಾಶಿಯ ಜೀವರನು ಸೃಜಿಸಿದ ಹಯವದನನು ||
ಪ್ರಯತ್ನ ಮಾಡಿ . ಗಂಡಸರು ಸಹ ಹೇಳಿಕೊಳ್ಳಬಹುದು .ಸರ್ವ ವಿಧದಿಂದ ಬರುವ ಆಪತ್ತುಗಳು ಪರಿಹಾರ ಆಗುತ್ತವೆ .
#vedavyasvibes #kannadavlogs #narayanvarmarangoli #laksmihrudayrangoli #narayanvarmalakshmihrudayastotra
コメント